ಬೆಂಗಳೂರುದಲ್ಲಿ ಕಟ್ಟಡ ಪ್ಲಾನ್ ಅನುಮೋದನೆ ಮತ್ತು Occupancy Certificate (OC) ಪ್ರಕ್ರಿಯೆಗಳನ್ನು ಡಿಜಿಟಲ್ ಮಾಡಲು ಜಾರಿಗೊಂಡಿರುವ EODB (Ease of Doing Business) ವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳು ಮೂಡಿವೆ. GBA ಮತ್ತು BBMP ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವ್ಯವಸ್ಥೆಯನ್ನು ಪುಣೆ ಮೂಲದ ಸಾಫ್ಟ್‌ಟೆಕ್ ಕಂಪನಿ ನಿರ್ವಹಿಸುತ್ತಿದೆ.
ವಾಸ್ತುಶಿಲ್ಪಿಗಳ ಪ್ರಕಾರ, RuleBuddy Scrutiny Fee ಕುರಿತು ಸ್ಪಷ್ಟ ಸರ್ಕಾರಿ ಆದೇಶವಿಲ್ಲದಿದ್ದರೂ ಶುಲ್ಕವನ್ನು ₹241 ರಿಂದ ₹2,400 ಕ್ಕೂ ಹೆಚ್ಚು ಹೆಚ್ಚಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ಪ್ರತಿವರ್ಷ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತಿದೆ ಎನ್ನಲಾಗುತ್ತಿದೆ.
ಇದಲ್ಲದೆ, ಬೆಂಗಳೂರಿನಲ್ಲಿ ಸ್ಥಳೀಯ ಕಚೇರಿ ಅಥವಾ ತಾಂತ್ರಿಕ ಬೆಂಬಲದ ಕೊರತೆ, ಸಾಫ್ಟ್‌ವೇರ್ ದೋಷಗಳಿಂದ OC ಮತ್ತು ಪ್ಲಾನ್ ಅಪ್ರೂವಲ್ ವಿಳಂಬ, ಹಾಗೂ ಆನ್‌ಲೈನ್ ವ್ಯವಸ್ಥೆ ಇದ್ದರೂ ಕೆಲವೊಂದು ಅನುಮೋದನೆಗಳು ಕೈಯಾರೆ ನೀಡಲಾಗುತ್ತಿರುವ ವಿಚಾರಗಳೂ ಚರ್ಚೆಗೆ ಕಾರಣವಾಗಿವೆ.
ಈ ಸಮಸ್ಯೆಗಳು ಮನೆ ಮಾಲೀಕರು, ಬಿಲ್ಡರ್‌ಗಳು ಮತ್ತು ವಾಸ್ತುಶಿಲ್ಪಿಗಳ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಕಟ್ಟಡ ಯೋಜನೆಗಳ ವೆಚ್ಚ ಮತ್ತು ಸಮಯ ಎರಡನ್ನೂ ಹೆಚ್ಚಿಸುತ್ತಿವೆ. GBA ಅನುಮೋದನೆಗಾಗಿ ಅರ್ಜಿ ಸಲ್ಲಿಸುವವರು ಈ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.
